ಪುಟಗಳು

ಭಾನುವಾರ, ಸೆಪ್ಟೆಂಬರ್ 15, 2013

ಪ್ರೌಢ ಶಿಕ್ಷಣಾ ಮಂಡಳಿ ಪರೀಕ್ಷೆಗಳು ರದ್ದಾಗಬೇಕು

ಕರ್ನಾಟಕ ಸರಕಾರ ನಡೆಸುವ ಪ್ರೌಢ ಶಿಕ್ಷಣಾ ಮಂಡಳಿಯ ಪರೀಕ್ಷೆಗಳು ರದ್ದಾಗಬೇಕು ಮತ್ತು ಸಂಗೀತ ನೃತ್ಯ ಶಿಕ್ಷಣದಲ್ಲಿ ಬಿ.ಮ್ಯೂಜಿಕ್ ಎಂ.ಮ್ಯೂಜಿಕ ಪದವಿ ಹೊಂದಿದವರನ್ನುಮಾತ್ರ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳ ಬೇಕು. 
ಈ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಾಗ ವಾದ್ಯ ಕಲಾವಿದರನ್ನು ಸಮಾನ ಅವಕಾಶ ನೀಡಬೇಕು. ಈ ಕೆಲವು ಮುಖ್ಯ ವಿಷಯಗಳೊಂದಿಗೆ ಇನ್ನು ಹತ್ತು ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ ಮುಂದಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಧಾರವಾಡದಲ್ಲಿ ಜಿಲ್ಲಾ ಮಟ್ಟದ ಶಾಸ್ತ್ರೀಯ ವಾದ್ಯ ಸಂಗೀತ ಕಲಾವಿದರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು ಈ ಸಮಾವೇಶ ನೀರಿಕ್ಷೆಗೆ ಮೀರಿ ಯಸಶ್ವಿಯಾಗಿರುವುದು ನಮ್ಮನ್ನು ತುಂಬ ಉತ್ಸಾಹಿಗಳನ್ನಾಗಿ ಮಾಡಿದೆ. ಈ ನಮ್ಮ ಹೋರಾಟಕ್ಕೆ ನಾಡಿನ ಸಮಸ್ತ ಹಿರಿಯ ಯುವ ಕಲಾವಿದರು ಬೆಂಬಲಿಸಲು ಕೋರುತ್ತೇವೆ. ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ 1997 ರಲ್ಲಿ ಅಖಂಡ ಧಾರವಾಡ ಜಿಲ್ಲೆಯಾಗಿದ್ದಾಗ ಗದುಗಿನ ಗಾನಯೋಗಿ ಪುಟ್ಟರಾಜರ ಅಮೃತ ಹಸ್ತದಿಂದ ಉದ್ಘಾಟನೆಯಾದ ಸಂಸ್ಥೆಯಾಗಿದ್ದು ಈ ಸಂಸ್ಥೆಗೆ ಪೂಜ್ಯಗುರು ಪುಟ್ಟರಾಜ ಕವಿ ಗವಾಯಿಗಳವರೆ ಹೆಸರಿಟ್ಟು, ಈ ಪರಿಷತ್ ಮಹಾ ಪೋಷಕರಾಗಿ, ನಮಗೆ ಸಂಗೀತ ಶಿಕ್ಷರ ನೇಮಕಾತಿಗಾಗಿ ಹೋರಾಟ ಮಾಡಲು ಪ್ರೇರಣೆ ನೀಡಿ ಪ್ರೋತಹಿಸಿದರು. ಅವರ ಮಾರ್ಗದರ್ಶನದಲ್ಲಿ ಅನೇಕ ಹೋರಾಟ ಮಾಡುವ ಮೂಲಕ ಸರಕಾರದ ಕಣ್ಣು ತೆರಸಿ ಸಂಗೀತ ಶಿಕ್ಷರ ನೇಮಕವಾಗುವಲ್ಲಿ ಯಸಶ್ವಿಯಾಗಿದ್ದೇವೆ.
ಈ ಸಂಗೀತ ಶಿಕ್ಷರ ನೇಮಕಾತಿ ಆರಂಭವಾದ ನಂತರ ಸರಕಾರ ನಡೆಸುವ ಪ್ರೌಢ ಶಿಕ್ಷಣಾ ಮಂಡಳಿಯ ಪರಿಕ್ಷೆಗೆ ತುಂಬಾ ಡಿಮ್ಯಾಂಡ ಬಂದು ಈ ಪರಿಕ್ಷೆಗಳು ತಮ್ಮ ಮೂಲಉದ್ದೇಶ ಮರೆತು ಸಂಗೀತ ಕ್ಷೇತ್ರವೇ ಹಾಳು ಮಾಡುತ್ತಿವೆ.ಇಂದು ಈ ಪರೀಕ್ಷೆಗಳು ಕೆಲವೇ ಜನ ನಿಜವಾದ ಕಲಾವಿದರನ್ನು ಹೊರತುಪಡಿಸಿದರೆ ಪರೀಕ್ಷಕರಾಗಿ ಬರುವ ಬಹುತೇಕ ಧಡ್ಡ ಪರೀಕ್ಷರಿಗೆ ದುಡ್ಡು ಮಾಡುವ ಕೇಂದ್ರವಾಗುತ್ತಿವೆ.ಇಲ್ಲಿ ಯಾರು ಹೆಚ್ಚು ದುಡ್ಡು ಕೊಡುತ್ತಾರೋ ಅವರಿಗೆ ಹೆಚ್ಚು ಅಂಕು ನೀಡಿ ಪಾಸು ಮಾಡಲಾಗುತ್ತಿದೆ ಇನ್ನೂ ಸ್ವಲ್ಪ ಹೆಚ್ಚು ದುಡ್ಡು ನೀಡಿದರೆ ಪರೀಕ್ಷಗೆ ಕೂಡದೆ ಇದ್ದರು ಉತ್ತಮ ಅಂಕು ನೀಡಲಾಗುತ್ತಿದೆ.ಕೆಲವರಂತೂ ಪರೀಕ್ಷಕರಾಗಿ ಬರುವದಕ್ಕಾಗಿಯೇ ಪರೀಕ್ಷೆಗಳನ್ನು ಮಾಡಿಕೊಂಡವರಿದ್ದಾರೆ ಇನ್ನೂ ಕೆಲವರು ತಮ್ಮ ಹೆಂಡತಿ ಅತ್ತೆ ಮಾವರನ್ನು ಪರೀಕ್ಷೆ ಪಾಸು ಮಾಡಿಸಿ ತಮ್ಮ ಜೊತೆಯಲ್ಲಿಯೇ ಪರೀಕ್ಷರನ್ನಾಗಿ ಕರೆದುಕೊಂಡು ಬರುತ್ತಾರೆ. ಅದರಲ್ಲಿಯೇ ಕೆಲವು ಬುದ್ದಿವಂತ ಧಡ್ಡ ಶಿಖಾಮಣಿಗಳು ಜಾಣತನ ಉಪಯೋಗಿಸಿ,ತಾವು ಬರಬೇಕೆಂದು ನಿರ್ಧರಿಸಿದ ಸೆಂಟರ್ ನಲ್ಲಿ ತಮಗೆ ದುಡ್ಡು ಕೊಡುವ ಕುಳಗಳನ್ನು ಪರೀಕ್ಷೆಗೆ ಕೂಡ್ರಿಸುತ್ತಾರೆ. ಈ ಪರೀಕ್ಷೆಗೆ ಕೂಡ ಬೇಕಾದರೆ ನಿರ್ದಿಷ್ಟ ಪಡಿಸಿದ ಶಾಲೆಯಲ್ಲಿ ಓದಲೇ ಬೇಕೆಂಬ ನಿಯಮವಿಲ್ಲ ಯಾರು ಬೇಕಾದರೂ ಎಲ್ಲಿ ಬೇಕಾದರೂ ಪರೀಕ್ಷೆಗೆ ಕುಳಿತುಕೊಳ್ಳ ಬಹುದಾಗಿದೆ.ಯಾವುದೇ ಸಂಗೀತದ ಹಿನ್ನಲೆ, ಕಡ್ಡಾಯ ಹಾಜರಾತಿ ಇಲ್ಲದೆಯೂ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿದೆ.ಕಾರಣ ಈ ರೀತಿ ನಡೆಸುವ ಪರೀಕ್ಷೆಗಳು ಬೇಕೇ?ಈ ರೀತಿ ಪಾಸದವರಿಂದ ಸಂಗೀತ ನೃತ್ಯ ಕಲೆ ಉಳಿಯಲು ಬೆಳೆಯಲು ಸಾಧ್ಯವೇ? ಈ ರೀತಿ ಪಾಸಾದವರು ಸರಳಿ, ಜಂಟಿ, ಅಲಂಕಾರ ಗೊತ್ತಿಲ್ಲದವರು ಶಾಲೆಯಲ್ಲಿ ಏನು ಸಂಗೀತ ಹೇಳಿಕೊಡಬಲ್ಲರು? ದುಡ್ಡು ಕೊಟ್ಟು ಶಿಕ್ಷಕರಾಗಿ ಹೋದ ಇವರು ಇಂದು ಸಂಗೀತ ಹೇಳಿಕೊಡಲು ಬಾರದಕ್ಕೆ ಛಪರಾಸಿ ಕೆಲಸ ಮಾಡುವ ಗತಿ ಬಂದಿದೆ. ಪಾಪ.. ಕೆಲವು ಜನ ಯುವ ಗಾಯಕರು ಸಾಧನೆಗೆ ಈ ನೌಕರಿ ಆಧಾರವಾಯಿತು ಎಂದು ಹೋದರೆ ಈ ಧಡ್ಡರ ಮಧ್ಯದಲ್ಲಿ ತಾವೂ ಗುರುತಿಸಿ ಕೊಳ್ಳುವಂತಾದದಕ್ಕೆ ಪಶ್ಚಾತಾಪ ಪಡುವಂತಾಗಿದೆ.ಸಂಗೀತ ಶಿಕ್ಷಕರೆಂದು ಹೇಳಿಕೊಳ್ಳುವದಕ್ಕೆ ನಾಚಿಕೆ ಪಡುತಿದ್ದಾರೆ. ಕಾರಣ ಇಂಥ ಪರೀಕ್ಷೆಗಳು ಬೇಕೇ? ಬೇಕೆನ್ನುವದಕ್ಕೆ ಒಂದೇ ಒಂದು ಸಕಾರಣ ಕೊಡಿ ಈ ಹೋರಾಟ ಮಾಡುವದೇ ಬೇಡ. ದಯಮಾಡಿ ಹಿರಿಯ ಸಂಗೀತ ದಿಗ್ಗಜರು ಈ ಕ್ಷೇತ್ರದ ಗೌರವ ಉಳಿಸಲು ನಮ್ಮ ಕಾಳಜಿ ಅರ್ಥ ಮಾಡಿಕೊಂಡು ಬೆಂಬಲಿಸಬೇಕು. ಇಲ್ಲದಿದ್ದರೆ ಈಗಾಗಲೇ ಎಷ್ಟೋ ಹಾಳಾದ ಈ ಕ್ಷೇತ್ರ ಸಂಪೂರ್ಣ ಹಾಳಾಗುವದರಲ್ಲಿ ಸಂಶಯ ವಿಲ್ಲಾ.